 
ಆಂದೋಲನಲೇಖಕ

ಕಾಲಕಾಲಕ್ಕೆ ವಿದ್ಯುತ್ಪ್ರವಾಹ ಬದಲಾಗುವುದನ್ನು ನೋಡಿ ಅಳತೆ ಮಾಡುವ ಉಪಕರಣ ಆಂದೋಲನದರ್ಶಕ (ಆಸಿಲೋಸ್ಕೋಪ್). ಪರ್ಯಾಯ ವಿದ್ಯುತ್ತಿನ ಅಥವಾ ಇತರ ದೋಲಕ ವಿದ್ಯುತ್ ಬಲದ ತರಂಗ ರೂಪಗಳನ್ನು ವಕ್ರರೇಖೆಯ ರೂಪದಲ್ಲಿ ದಾಖಲಿಸುವ ಉಪಕರಣಕ್ಕೆ ಆಂದೋಲನಲೇಖ (ಆಸಿಲೋಗ್ರಾಫ್). ಈ ಬದಲಾವಣೆಗಳು ಪರ್ಯಾಯ ವಿದ್ಯುತ್ಪ್ರವಾಹಗಳ ಹಾಗೆ ಪುನರಾವರ್ತನೆಯಾಗಬಹುದು. ಆಗ ಬರುವ ಎಲ್ಲ ತರಂಗಗಳೂ ಒಂದೇ ಸಮವಾಗಿರುತ್ತವೆ. ಈ ತರಂಗದ ರೂಪವನ್ನು ನಿರ್ದೇಶಿಸಲು ಎರಡು ಕ್ರಮಗಳಿವೆ. ಒಂದು ತರಂಗದ ರೂಪ. ಇನ್ನೊಂದು ಆಂದೋಲನ ಕ್ರಮ. ಚಕ್ರೀಯವಾದ (ಸೈಕ್ಲಿಕ್) ವ್ಯತ್ಯಾಸಗಳು ಉಂಟಾದಾಗ ಮೊದಲನೆಯ ಕ್ರಮವನ್ನು ಅನುಸರಿಸಬಹುದು. ಆದರೆ ಆಂದೋಲನ ಮಾಪನದ ಕ್ರಮವನ್ನು ಎಲ್ಲ ಉದ್ದೇಶಗಳಿಗೂ ssಬಳಸಬಹುದು. ಅದಕ್ಕಾಗಿ ಇದು ಸಾಮಾನ್ಯವಾಗಿ ಬಳಕೆಯಲ್ಲಿದೆ.
	
ಜೂಬರ್ಟ್ ಅವರು ಮೊಟ್ಟಮೊದಲು ಉಪಯೋಗಿಸಿದ ಸ್ಪರ್ಶ (ಕಾಂಟೆಕ್ಟ್) ಕ್ರಮದಲ್ಲಿ ಒಂದು ಆವರ್ತಕ್ಕೆ ಒಂದುಸಾರಿ ಸ್ಥಿರ ವಿದ್ಯುತ್ತಿನ ವೋಲ್ಟ್ ಮೀಟರಿಗೆ ಒಂದು ಕ್ಷಣಕಾಲ ಸಂಬಂಧ ಏರ್ಪಡುತ್ತದೆ. ಇದರಿಂದ ಆ ಕ್ಷಣದ ವಿದ್ಯುದ್ವಿಭವವನ್ನು ತಿಳಿಯಬಹುದು. ಸ್ಪರ್ಶ ಸ್ಥಳವನ್ನು ಬದಲಾಯಿಸಿದ ಹಾಗೂ ಇತರ ವಿದ್ಯುದ್ವಿಭವಗಳನ್ನು (ವೋಲ್‍ಟೇಜಸ್) ಅಳತೆಮಾಡಿ ( ಅಕ್ಷದ ಮೇಲೆ ಕೆಲವನ್ನೂ ( ಅಕ್ಷದ ಮೇಲೆ ಈ ಕ್ಷಣಿಕ ವಿದ್ಯುದ್ವಿಭವಗಳನ್ನೂ ಗುರುತು ಮಾಡಿ , ತರಂಗವನ್ನು ಸಂಪೂರ್ಣವಾಗಿ ತೋರಿಸಬಹುದು. 

ಚಿತ್ರ-1

ಚಿತ್ರ 1 ರಿಂದ ಈ ಕ್ರಮ ತಿಳಿಯುತ್ತದೆ. ಆ ಗಟ್ಟಿಯಾದ ಅವಾಹಕದಿಂದ ಪ್ರತ್ಯೇಕಿಸಿದ ಒಂದು ಬಿಲ್ಲೆ. ಅದನ್ನು ಪರ್ಯಾಯ ವಿದ್ಯುಜ್ಜನಕದ (ಆಲ್‍ಟರ್ನೇಟರ್) ಅಚ್ಚಿನ ಮೇಲೆ ಜೋಡಿಸಿರಬಹುದು. ಇಲ್ಲವೆ ಅದನ್ನು ಸಮಕಾಲಿಕವಾಗಿ (ಸಿಂಕ್ರೊನಸ್‍ಲಿ) ಓಡಿಸಬಹುದು. ಅದರ ಮಧ್ಯದಲ್ಲಿ ಒಂದು ಸಣ್ಣ ಲೋಹದ ಉಂಗುರವಿದೆ. ಅದರ ಮೇಲೆ ಒಂದು ಬ್ರಶ್ ( ನಿಂತಿದೆ. ಇದೇ ಉಂಗುರಕ್ಕೆ ಚಕ್ರದೊಂದಿಗೆ ತಿರುಗುವ ಅ ಎಂಬ ಲೋಹದ ಬಡಿಗೆಯನ್ನು ಖಾಯಂ ಆಗಿ ಜೋಡಿಸಿರುತ್ತಾರೆ. (1 ಎಂಬ ಇನ್ನೊಂದು ಬ್ರಶ್ ಚಕ್ರದ ಒಂದು ಪರಿಭ್ರಮಣೆಗೆ ಒಂದು ಸಲ ಒಂದು ಕ್ಷಣ ಕಾಲ ಅ ಯೊಂದಿಗೆ ಸೇರುತ್ತದೆ. ಈ ಸಂಪರ್ಕವಾದಾಗ v ಎಂಬ ಸ್ಥಾಯೀವಿದ್ಯುತ್ತಿನ ವೋಲ್ಟ್‍ಮಾಪಕ ವಿದ್ಯುತ್‍ಜನಕದಕೊನೆಗಳಿಗೆ ಸಂಬಂಧವನ್ನು ಪಡೆದು ಆ ಕ್ಷಣದ ವಿದ್ಯುದ್ವಿಭವÀವನ್ನು ಗುರುತುಮಾಡುತ್ತದೆ. ( ಬ್ರಶ್ ಅನ್ನು S ಅಳತೆ ಪಟ್ಟಿಯ ಸುತ್ತ ಚಲಿಸುವುದರಿಂದ ಬೇರೆ ಕ್ಷಣಿಕ ವಿದ್ಯುದ್ಬಲಗಳನ್ನು ಗುರುತುಮಾಡಿ ಅವುಗಳಿಂದ ಒಂದು ತರಂಗದ ಆಕಾರವನ್ನು ಪಡೆಯಬಹುದು. ಈ ಕ್ರಮವನ್ನು ತೊಡಕಾದ ತರಂಗಗಳ ಆಕಾರಗಳಲ್ಲಿ ಸ್ವರಮೇಳವನ್ನು (ಹಾರ್ಮನೀಸ್) ಪ್ರತ್ಯೇಕಿಸಲು ಉಪಯೋಗಿಸುತ್ತಾರೆ.
	
ಮೇಲಿನ ಕ್ರಮದಲ್ಲಿ ಹಾಸ್ಪಿಟೀಲಿಯರ್ ಮಾಡಿದ ಮಾರ್ಪಾಡಿನಲ್ಲಿ ತರಂಗದ ಆಕಾರವನ್ನು ಸುತ್ತುತ್ತಿರುವ ಮದ್ದಲೆಯ (ಡ್ರಂ) ಹೊರಭಾಗದಲ್ಲಿ ಗುರುತು ಮಾಡಬಹುದು. ಈ ಮದ್ದಲೆಯನ್ನೂ ಸ್ಪರ್ಶಕಾರಿಯನ್ನೂ (ಕಾಂಟಾಕ್ಟ್ ಮೇಕರ್) ಒಂದು ಸಣ್ಣ ಸಮಕಾಲಿಕ ಮೋಟಾರು ಓಡಿಸುತ್ತದೆ. ಈ ಮೋಟಾರಿಗೆ ಪರೀಕ್ಷೆ ಮಾಡುತ್ತಿರುವ ಆಕಾರದಿಂದ ಶಕ್ತಿ ಒದಗುತ್ತದೆ. ಸಂಯೋಜನೆ ಮಾಡುವ ಬ್ರಶ್‍ಗಳು ವಿದ್ಯುಚ್ಚಾಲಕ ಬಲ (ಇ.ಎಂ.ಎಫ್) ತರಂಗಕ್ಕೆ ಸಂಬಂಧಿಸಿದಂತೆ ಒಂದೇ ಸಮವಾಗಿ ಸ್ಥಾನ ಪಲ್ಲಟವಾಗುವ ಜಾಗವನ್ನು ನಿಧಾನವಾಗಿ ಬದಲಾಯಿಸಿ ಭ್ರಮಿಸುತ್ತಿರುವ ಮದ್ದಲೆಗೆ ಅಂಟಿಸಿರುವ ಕಾಗದದ ಮೇಲೆ ತಗಲಿಸಿರುವ ಲೇಖನಿಯ ಸ್ಥಾನ ಯಾವುದಾದರೂ ಒಂದು ಕ್ಷಣದಲ್ಲಿ ಆಗ ಇರುವ ವಿದ್ಯುಚ್ಚಾಲಕ ಬಲದ ಪ್ರಮಾಣಕ್ಕೆ ಅನುಗುಣವಾಗಿರುತ್ತದೆ.

ಚಿತ್ರ-2

ವಿದ್ಯುತ್ಪ್ರವಾಹಗಳ ಅಥವಾ ವಿದ್ಯುದ್ವಿಭವಗಳ ಅಲೆಗಳ ಕರಾರುವಾಕ್ಕಾದ ಆಕಾರಗಳನ್ನು ಒಡೆಯಲು ಉಪಯೋಗಿಸುವ ಆಂದೋಲನ ಮಾಪಕಗಳು ಪ್ರವಾಹ ವಿದ್ಯುನ್ಮಾಪಕಗಳ (ಗ್ಯಾಲ್ವನೋಮೀಟರ್ಸ್) ತತ್ತ್ವದ ಮೇಲೆ ಕೆಲಸ ಮಾಡುತ್ತದೆ. ಇವು ವಿದ್ಯುತ್ಪ್ರವಾಹದ ಅಥವಾ ವಿದ್ಯುದ್ವಿಭವದ ಅತಿಶೀಘ್ರವಾದ ಬದಲಾವಣೆಗಳನ್ನು ಅನುಸರಿಸಿ ಇವನ್ನು ಕಣ್ಣಿನಿಂದ ನೋಡುವುದಕ್ಕಾಗಲಿ ಛಾಯಾಚಿತ್ರಗಳನ್ನು ತೆಗೆಯುವುದಕ್ಕಾಗಲಿ, ಒಂದು ಪರದೆಯ ಮೇಲೆ ತೋರಿಸುತ್ತವೆ. ಇವುಗಳಲ್ಲಿ ಚಲಿಸುವ ಸುರುಳಿ, ಚಲಿಸುವ ಕಬ್ಬಿಣ, ಕಾದ ತಂತಿ, ಸ್ಥಿರ ವಿದ್ಯುತ್ ಮತ್ತು ಅಧೋವಾಟ ಕಿರಣ ಮೊದಲಾದ ಅನೇಕ ಮಾದರಿಗಳಿವೆ. ಕೊನೆಯದು ಒಂದು ಹೊರತಾಗಿ ಉಳಿದವುಗಳಲ್ಲೆಲ್ಲ ಒಂದೇ ಸಾಮಾನ್ಯವಾದ ಏರ್ಪಾಡಿರುತ್ತದೆ. ಚಲಿಸುವ ಕ್ರಮದಲ್ಲಿ ವಿದ್ಯುತ್ ಅಥವಾ ವಿದ್ಯುದ್ವಿಭವ ಹರಿದಾಗ ಸೂಜಿ ತಿರುಗುತ್ತದೆ. ದೃಷ್ಟಿಯ ಪದ್ಧತಿಯಲ್ಲಿ (ಆಪ್ಪಿಕಲ್ ಸಿಸ್ಟಂ) ಈ ಚಲನೆಗಳು ಫೋಟೊ ಪಟಲದ ಮೇಲೆ ಪುನರಾವೃತ್ತಿಯಾಗುತ್ತವೆ. ಶೀಘ್ರವಾದ ಬದಲಾವಣೆಗೆ ಕೂಡಲೆ ಪ್ರತಿಕ್ರಿಯೆಯನ್ನು ತೋರಿಸಲು ಚಲಿಸುವ ಉಪಕರಣದ ನೈಸರ್ಗಿಕ ಆವರ್ತನೆಯ ಕಾಲ ಪರೀಕ್ಷೆ ಮಾಡುವ ವಿದ್ಯುತ್ತಿನ ಆವರ್ತನೆಯ ಕಾಲಕ್ಕಿಂತ ಚಿಕ್ಕದಾಗಿರಬೇಕು. ಚಲಿಸುವ ಉಪಕರಣಕ್ಕೆ ಒಂದು ಕನ್ನಡಿಯನ್ನು ಜೋಡಿಸಿದರೆ ಪಕ್ಕದ ಬಾಗುಗಳು ಒಂದು ಕನ್ನಡಿಯಿಂದ ಈ ದಿಕ್ಕಿಗೆ ಸಮಕೋನದಲ್ಲಿ ಒಂದು ಚಲನೆಯನ್ನು ಕೊಟ್ಟು ಚುಕ್ಕಿ ಒಂದು ವಕ್ರ ರೇಖೆಯಲ್ಲಿ ಸುತ್ತುತ್ತದೆಯೆಂದು ತೋರಿಸಬಹುದು. ಬೆಳಕಿನ ಚುಕ್ಕಿ ಸಮಕಾಲದಲ್ಲಿ ಸಮವಾದ ದೂರಬಾಗುವ ಹಾಗೆ ಮಾಡಿ ಬರುವ ವಕ್ರರೇಖೆ ಕಾಲಕ್ಕೂ ದೂರಕ್ಕೂ ಇರುವ ಸಂಬಂಧವನ್ನು ಸ್ವಯಂಚಾಲಿಯಾಗಿ ತೋರಿಸುವ ಹಾಗೆ ಮಾಡಬಹುದು. ಒಂದು ಸಣ್ಣ ಸಮಕಲಿಕವಾದ (ಸಿಂಕ್ರೊನಸ್) ಮೋಟಾರಿನಿಂದ ಓಡುವ ಚಾಚುಭಾಗ (ಕ್ಯಾಮ್) ಕನ್ನಡಿಗ 1ಳಿ ಆವರ್ತಗಳಲ್ಲಿ ಮುಂದಕ್ಕೆ ಚಲನೆಯನ್ನು ಕೊಟ್ಟು ಮುಂದಿನ ಳಿ ಆವರ್ತದಲ್ಲಿ ಸ್ವಸ್ಥಾನಕ್ಕೆ ತಿರುಗಿ ಬರುತ್ತದೆ. ಈ ಕಾಲದಲ್ಲಿ ಒಂದು ತಿರುಗುವ ಬಾಗಿಲಿನಿಂದ ಬೆಳಕನ್ನು ಕತ್ತರಿಸುತ್ತಾರೆ.

ಚಿತ್ರ-3

	
ಡಡ್ಡೆಲ್ ಚಲಿಸುವ ಸುರಳಿಯ ಆಂದೋಲನಲೇಖ : ಚಿತ್ರ 3 ರಿಂದ ಅದರ ತತ್ತ್ವ ತಿಳಿಯಬಹುದು, ಫಾಸ್ಫರ್ ಕಂಚಿನ ಕುಣಿಕೆಯೇ ಚಲಿಸುವ ಭಾಗ. ಇದನ್ನು ಪ್ರಬಲವಾದ ಕಾಂತಕ್ಷೇತ್ರದಲ್ಲಿ ಇಟ್ಟಿರುತ್ತಾರೆ. ಈ ಕ್ಷೇತ್ರವನ್ನು ಸಾದಾ ಕಾಂತದಿಂದಾಗಲಿ ವಿದ್ಯುತ್ಕಾಂತದಿಂದಾಗಲಿ (ಎಲೆಕ್ಟ್ರೋ ಮ್ಯಾಗ್ನೆಟ್) ಉತ್ಪತ್ತಿ ಮಾಡಬಹುದು. ಫಾಸ್ಫರ್ ಕಂಚಿನ ಕುಣಿಕೆಯ ಮಧ್ಯದಲ್ಲಿ ಒಂದು ಸಣ್ಣ ಹಗುರವಾದ ಕನ್ನಡಿ ಅಂಟಿಸಿದೆ.

ಚಿತ್ರ-4

 
ಕುಣಿಕೆಯ ಎರಡು ಭಾಗಗಳಿಗೆ ಮಧ್ಯೆ ಒಂದು ಮೆದುವಾದ ಕಬ್ಬಿಣದ ತುಂಡನ್ನು ಕನ್ನಡಿಯನ್ನು ಬಿಟ್ಟು ಇಟ್ಟಿದೆ. ವಿದ್ಯುತ್ಪ್ರವಾಹ ಕುಣಿಕೆಯ (ಲೂಪ್) ಮೂಲಕ ಹರಿದಾಗ ಒಂದು ಭಾಗ ಒಳಕ್ಕೂ ಇನ್ನೊಂದು ಹೊರಕ್ಕೂ ಚಲಿಸಲು ಪ್ರಾರಂಭವಾಗಿ ಅದು ಪಕ್ಕಕ್ಕೆ ಬಾಗುತ್ತದೆ. ವಿದ್ಯುತ್ ಪರ್ಯಾಯವಾದಾಗ (ಆಲ್ಟರ್ನೇಟ್) ಕುಣಿಕೆ ಸ್ಪಂದಿಸುತ್ತದೆ. ಈ ಉಪಕರಣವನ್ನೇ ಎಣ್ಣೆಯಲ್ಲಿ ಮುಳುಗಿಸಿಟ್ಟು ಚಲನೆಯನ್ನು ಕಡಿಮೆ ಮಾಡುತ್ತಾರೆ. 
ಕಾಂತಕ್ಷೇತ್ರದಲ್ಲಿ ಒಂದೊಂದಕ್ಕೂ ತನ್ನದೇ ಕನ್ನಡಿಯಿರುವ ಎರಡು ಕುಣಿಕೆಗಳನ್ನಿಡುವುದು ರೂಢಿ. ಒಂದೇ ಕಾಲದಲ್ಲಿ ಒಂದು ಜೊತೆ ವಕ ್ರರೇಖೆಗಳನ್ನು ಎಳೆದು ಅವುಗಳ ಪುನರಾವರ್ತಸರಣಿಯ ಪ್ರಾವಸ್ಥೆಯ (ಫೇಸ್ó) ವ್ಯತ್ಯಾಸ ಪತ್ತೆ ಮಾಡಬಹುದು. ಅವುಗಳಿಗೆ ನಡುವೆ ಒಂದು ಕನ್ನಡಿಯನ್ನು ಭದ್ರವಾಗಿ ಇಟ್ಟರೆ ಅದು ಅಲೆಗಳ ರೂಪಗಳನ್ನು ಬರೆದಿಡುವ ಪಟಲದಲ್ಲಿ ಶೂನ್ಯ ರೇಖೆಯನ್ನು ಒದಗಿಸುತ್ತದೆ. ಈ ಆಂದೋಲನ ಮಾಪಕಗಳನ್ನು ತಗ್ಗಿನ ವಿದ್ಯುದ್ವಿಭವಗಳಲ್ಲಿಯೂ ಆವೃತ್ತಿ (ಸೆಕೆಂಡಿಗೆ 300 ಆವರ್ತಗಳು) ಇರುವಾಗ ಬಳಸಬಹುದು.

ಚಿತ್ರ-5-ಮತ್ತು-6

ಬ್ಲಾಂಡೆಲ್ ಚಲಿಸುವ ಕಬ್ಬಿಣದ ಆಂದೋಲನ ಲೇಖಕ: ಹಾಳೆಯಾದ, ಒಂದು ಚೂಪಾಗುತ್ತಾ ಹೋಗುವ ಅಯಸ್ಕಾಂತದ ಧ್ರುವಗಳು ಮತ್ತು ಕಬ್ಬಿಣದ ಸರಳುಗಳಿಂದ ಕೂಡಿದ ಬಲಿಷ್ಠವಾದ ಶಾಶ್ವತವಾದ U ಆಕಾರದ ಕಾಂತ ಅಗತ್ಯವಾದ ಕಾಂತಕ್ಷೇತ್ರವನ್ನು ಒದಗಿಸುತ್ತದೆ. ನಡುವೆ ಒಂದೋ ಎರಡೋ ಗಾಳಿಯ ಕಂಡಿಗಳಿರುತ್ತವೆ. ತೆಳುವಾದ, ಅಗಲ ಕಡಿಮೆಯಾದ, ಮೆದು ಕಬ್ಬಿಣವನ್ನು ಒಂದೊಂದು ಕಂಡಿಯಲ್ಲಿಯೂ ಇಟ್ಟಿರುತ್ತಾರೆ. ಆಗ ಬಲರೇಖೆಗಳು (ಲೈನ್ಸ್ ಆಫ್ ಫೋರ್ಸ್) ಅಗಲಕ್ಕೆ ಅಡ್ಡಲಾಗಿ ಒಂದು ಕಡೆಯಿಂದ ಇನ್ನೊಂದಕ್ಕೆ ದಾಟುತ್ತವೆ. ಸ್ವಾಭಾವಿಕವಾದ ತಿರುಚುವ ಆವೃತ್ತಿ ಸೆಕೆಂಡಿಗೆ 40,000ದ ವರೆಗೂ ಇರುವಂತೆ ಈ ಪಟ್ಟಿಗಳನ್ನು ಎಳೆತದಲ್ಲಿಟ್ಟಿರುತ್ತಾರೆ. ಕಾಂತಕ್ಷೇತ್ರಕ್ಕೆ ಸಮಕೋನದಲ್ಲಿ ಪಕ್ಕಕ್ಕೆ ಬಾಗಿಸುವ ಶಕ್ತಿಯನ್ನು ಒಂದೊಂದು ಕಂಡಿಯ ಪಕ್ಕಗಳಲ್ಲಿಯೂ ಇರುವ ಚಿಕ್ಕತಂತಿಯ ಸುರುಳಿಗಳು ಒದಗಿಸುತ್ತವೆ. ಪಟ್ಟಿಯ ಮಧ್ಯೆ ಇರುವ ಕನ್ನಡಿ ತಿರುವನ್ನು ಸೂಚಿಸುತ್ತದೆ. ಎಣ್ಣೆಯಲ್ಲಿ ಮುಳುಗಿಸುವುದರಿಂದ ವೇಗ ಮಂದವಾಗುತ್ತದೆ. ಈ ಅಣಿಯನ್ನು ಚಿತ್ರ 5ರಲ್ಲಿ ತೋರಿಸಿದೆ.

ಚಿತ್ರ-7

ಇರ್ವಿನ್ ಕಾದ ತಂತಿಯ ಆಂದೋಲನಲೇಖ : ಇದು ಉಷ್ಣದ ಮೂಲಕ ನಡೆಯುತ್ತದೆ. ಈ ಉಪಕರಣದಲ್ಲಿ ಅಲೆಯ ರೂಪವನ್ನು ಕಂಡು ಹಿಡಿಯಬೇಕಾದ ಪರ್ಯಾಯ ವಿದ್ಯುತ್ತು ಎರಡು ತೆಳುವಾದ ತಂತಿಗಳ ಮೂಲಕ ಹರಿಯುತ್ತದೆ. ಇದರ ಜೊತೆಗೆ ಈ ತಂತಿಗಳಲ್ಲಿ ಒಂದು ಬ್ಯಾಟರಿಯಿಂದ ಅದೇ ದಿಕ್ಕಿನಲ್ಲಿ ಹರಿಯುವ ವಿದ್ಯುತ್ಪ್ರವಾಹಗಳ ಮೊತ್ತವೂ ಇನ್ನೊಂದರಲ್ಲಿ ಆ ಪ್ರವಾಹಗಳ ವ್ಯತ್ಯಾಸವೂ ಹರಿಯುತ್ತದೆ. ಹೀಗೆ ತಂತಿಯ ಒಂದು ಭಾಗ ಮತ್ತೊಂದಕ್ಕಿಂತ ಹೆಚ್ಚಾಗಿ ಕಾದು ಒಂದು ತಂತಿ ಇನ್ನೊಂದಕ್ಕಿಂತ ಹೆಚ್ಚಾಗಿ ಉದ್ದವಾಗಿ, ಅದರ ಪರಿಣಾಮವಾಗಿ ಒಂದು ಕನ್ನಡಿಯನ್ನು ವಾಲಿಸುತ್ತದೆ. ಸಾಮಾನ್ಯವಾದ ರೀತಿಯಲ್ಲಿ ಈ ಕನ್ನಡಿಯಿಂದ ಪ್ರತಿ ಫಲಿತವಾದ ಬೆಳಕನ್ನು ಒಂದು ಪರದೆಯ ಮೇಲೆ ಕಾಣಬಹುದು. ಆಥವಾ ಅದರ ಛಾಯಾಚಿತ್ರವನ್ನು ತೆಗೆಯಬಹುದು. ಈ ಉಪಕರಣದ ತತ್ತ್ವವನ್ನು ಚಿತ್ರ 6 ರಿಂದ ತಿಳಿಯಬಹುದು. ಇಲ್ಲಿ ಃ ಎನ್ನುವುದು ಬ್ಯಾಟರಿ. S ಎಂಬುವು ಪಟ್ಟಿಗಳು. ಖ ಎಂಬುವು ಒಂದೇ ಬಲದ ರೋಧಶಕ್ತಿಗಳು. ಖಿ1 ಮತ್ತು ಖಿ2 ಈ ಸಂಬಂಧದ ತಿರುಪುಗಳಿಗೆ ಬದಲಾಯಿಸುವ ವಿದ್ಯುತ್ಪ್ರವಾಹದ ಆಕರವನ್ನು ಸೇರಿಸಿದೆ.
	
ಸ್ಥಾಯೀ ವಿದ್ಯುತ್ತಿನ ಆಂದೋಲನಲೇಖಕ : ಹೋ ಮತ್ತು ಕೇಟೋ ಇವರು ನಿರ್ಮಿಸಿದ ಈ ಸಾಧನ ಕಡಿಮೆಯ ಆವೃತ್ತಿಯ ಹೆಚ್ಚಾದ ವಿದ್ಯುದ್ಬಲಕ್ಕೆ ಹೊಂದಿಕೊಂಡಿದೆ. ಇದರ ಅನುಕೂಲಗಳು : ಇದು ಶಕ್ತಿಯನ್ನು ವ್ಯಯಮಾಡುವುದಿಲ್ಲ. ಇದಕ್ಕೆ ಕಿರಿದಾದ ವಿದ್ಯುತ್ಪ್ರವಾಹ ಸಾಕು. ಇದು ವಿದ್ಯುತ್ಕಾಂತ ಕ್ಷೇತ್ರಕ್ಕೆ ಬದಲಾಗಿ ಸ್ಥಾಯೀವಿದ್ಯುತ್ ಕ್ಷೇತ್ರದಲ್ಲಿ (ಎಲೆಕ್ಟ್ರೋ ಸ್ಟಾಟಿಕ್ ಫೀಲ್ಡ್) ತೂಗಾಡುವ ಕಿರಿದಗಲದ ಜೋಡು ಪಟ್ಟಿಯನ್ನು ಉಪಯೋಗಿಸುತ್ತದೆ. ಈ ಸ್ಥಾಯೀ ವಿದ್ಯುತ್ ಕ್ಷೇತ್ರವನ್ನು (ಚಿತ್ರ 7) ಈ1 ಮತ್ತು ಈ2 ಈ ಎರಡು ಲೋಹದ ತಗಡುಗಳಿಗೆ ಪರ್ಯಾಯವಾದ ಒತ್ತಡವನ್ನು ಪ್ರಯೋಗಿಸಿ ಪಡೆಯುತ್ತಾರೆ. ವಿದ್ಯುದ್ವಿಭವ ಕಡಿಮೆಯಿದ್ದಾಗ ಈ1 ಮತ್ತು ಈ2 -- ಇವಕ್ಕೆ ನೇರವಾಗಿ ಸಂಬಂಧವನ್ನು ಕಲ್ಪಿಸುತ್ತಾರೆ. ಆದರೆ ಈ ನಮೂನೆಯನ್ನು ಅನುಕೂಲವಾಗಿ ಬಳಸಬಹುದು. ಹೆಚ್ಚಿನ ವಿದ್ಯುದ್ವಿಭವಗಳಲ್ಲಿ ಅ ಎಂಬ ವಿದ್ಯುತ್ ಸಂಗ್ರಾಹಕದಿಂದ (ಕಂಡೆನ್ಸರ್) ವಿದ್ಯುದ್ವಿಭವವನ್ನು ಇಳಿಸುತ್ತಾರೆ. S1 ಮತ್ತು S2 ಇವು ಅವಾಹಕದ ಮೂಲಕ, g, h ಈ ಸ್ಥಳಗಳಲ್ಲಿ ಪ್ರತ್ಯೇಕಿಸಿದ (ಇನ್ಸುಲೇಟೆಡ್) ಕಂಪನ ಮಾಡುವ ಪಟ್ಟಿಗಳು. ಇದನ್ನು g ಎಂಬ ಎಗರುಪಟ್ಟಿಯಿಂದ (ಸ್ಪ್ರಿಂಗ್) ಎಳೆತದಲ್ಲಿಟ್ಟು P ಎಂಬ ರಾಟೆಯ ಮೂಲಕ ಹೋಗುವ ರೇಷ್ಮೆಯ ದಾರಕ್ಕೆ ಸೇರಿಸಿರುತ್ತಾರೆ ಎ. ಟಿ ಎಂಬ ತುದಿಯನ್ನು ತಿರುಗಿಸುವುದರಿಂದ ಎಳೆತವನ್ನು ಹೆಚ್ಚು ಕಡಿಮೆ ಮಾಡಬಹುದು. ಈ ಪಟ್ಟಿಗಳನ್ನು ಮತ್ತು e ಬಳಿ 300 ವೋಲ್ಟ್ ವಿದ್ಯುದ್ವಿಭವವನ್ನು ಕೊಡುವ ಃ ಬ್ಯಾಟರಿಗೆ ಜೋಡಿಸಿದೆ. ಹೀಗಾಗಿ ಇವುಗಳಲ್ಲಿ ಎದುರು ದಿಕ್ಕಿನ ವಿದ್ಯುತ್ತು ಹರಿಯುತ್ತದೆ. ಸ್ಥಾಯೀವಿದ್ಯುತ್ ಕ್ಷೇತ್ರದ ತಗಡುಗಳಿಗೆ ಸಂಬಂಧಪಟ್ಟಂತೆ ಪಟ್ಟಿಗಳ ವಿದ್ಯುದ್ವಿಭವವನ್ನು ನಿಷ್ಕರ್ಷೆ ಮಾಡಲು ಅ1 ಮತ್ತು ಅ2 ಎಂಬ ವಿದ್ಯುತ್ ಸಂಗ್ರಾಹಕಗಳನ್ನು ಸೇರಿಸಿದೆ. ಅವೆರಡ ಸಂಧಿಸ್ಥಾನವಾದ ಜ ಯನ್ನು ವಿದ್ಯುತ್ಕೋಶದ ಮಧ್ಯ ಭಾಗವಾದ ಞಗೆ ಜೋಡಿಸಿದೆ. ಈ ಪಟ್ಟಿಗಳಿಗೆ ಒಂದು ಕನ್ನಡಿಯನ್ನು ತಗಲಿಸಿ ಪರಿಶೀಲನೆಗಳನ್ನು ಈ1 ಮತ್ತು ಈ2 ಇವುಗಳಲ್ಲಿರುವ W1 ಮತ್ತು W2 ಎಂಬ ಕಿಟಕಿಗಳ ಮೂಲಕ ಪ್ರತಿಫಲನವಾದ ಬೆಳಕಿನಿಂದ ಮಾಡುತ್ತಾರೆ. ಈ1 ಮತ್ತು ಈ2 ಇವೆರಡಕ್ಕೂ ಮಧ್ಯೆ ಉತ್ಪನ್ನವಾಗುವ ಪರ್ಯಾಯ ಸ್ಥಾಯೀವಿದ್ಯುತ್ ಕ್ಷೇತ್ರದಿಂದ ಈ ಪಟ್ಟಿಗಳು ಕಂಪಿಸುತ್ತವೆ. ಅದಕ್ಕಾಗಿ ಪ್ರಯೋಗಿಸಿದ ವಿದ್ಯುದ್ವಿಭವ ಗಳನ್ನು ಕರಾರುವಾಕ್ಕಾಗಿ ಅನುಸರಿಸಲು ಕುಣಿಕೆಯ (ಲೂಪ್) ಕಂಪನದ ಕಾಲ ಬಹಳ ಚಿಕ್ಕದಾಗಿರಬೇಕು.
ಅಧೋವಾಟ ಕಿರಣಗಳ ಆಂದೋಲನ ಲೇಖಕ : ಇದು ಈಗ ವಿಶೇಷ ಬಳಕೆಯಲ್ಲಿದೆ. ಅದರ ಮೊದಲಿನ ರೂಪದಲ್ಲಿ ಋಣ ವಿದ್ಯುದ್ಧ್ರುವದಿಂದ ಧನ ವಿದ್ಯುದ್ಧ್ರುವಕ್ಕೆ ಅವುಗಳ ಚಲನೆಗೆ ಸಮಕೋನವಾಗಿ ಸರಿಯುವ ವಿದ್ಯುತ್ಕಾಂತದ ಕ್ಷೇತ್ರವನ್ನು ಪ್ರಯೋಗಿಸಿ ತಿರುಗಿಸುತ್ತಿದ್ದರು. ಈ ವಿದ್ಯುನ್ಮಾನಗಳಿಗೆ ಜಡತ್ವ (ಇನರ್ಷಿಯ) ಇಲ್ಲ. ಉಪಕರಣ ನಿರ್ಮಾಣದಲ್ಲಿಯೂ ಕೆಲಸಮಾಡುವ ರೀತಿಯಲ್ಲಿಯೂ ಸರಳವಾಗಿದೆ. ಆದ್ದರಿಂದ ಕ್ಷಣಿಕವಾದ ಹೆಚ್ಚಿನ ಆವೃತ್ತಿಯ (ಫ್ರೀಕ್ವೆನ್ಸಿ) ಘಟನೆಗಳನ್ನು ಪರಿಶೀಲಿಸಲು ಅನುಕೂಲವಾಗಿದೆ.

ಈಗಿನ ರೂಪದಲ್ಲಿ ಈ ಉಪಕರಣದಲ್ಲಿ ಪೇರು ಹಣ್ಣಿನ ಆಕಾರದ ಗಾಜಿನ ಕೊಳವೆಯ ಅಗಲವಾದ ಭಾಗಕ್ಕೆ ಒಂದು ಮಿಶ್ರಣವನ್ನು ಬಳಿದು ಸ್ಫುರಣವಾಗುವ (ಫ್ಲೂರಸೆಂಟ್) ಪರದೆಯಾಗಿ ಮಾಡುತ್ತಾರೆ. ತಯಾರುಮಾಡುವಾಗಲೇ ಕೊಳವೆಯಿಂದ ಗಾಳಿಯನ್ನೆಲ್ಲ ತೆಗೆದು ಕೊಂಚವೇ ಆರ್ಗಾನ್ ಅನಿಲವನ್ನು ಒಳಕ್ಕೆ ಬಿಡುತ್ತಾರೆ. ಅದರ ಕಿರಿದಾದ ಕೊನೆಯಲ್ಲಿ ಆಕ್ಸೈಡನ್ನು ಬಳಿದ ಟಂಗ್‍ಸ್ಟನ್ನಿನ ತಂತುವಿರುತ್ತದೆ(ಫಿಲಮೆಂಟ್). ಅದರ ಕೊನೆಯನ್ನು ಕೊಳವೆಯ ತಳದಿಂದ ಹೊರಕ್ಕೆ ತಂದಿರುತ್ತದೆ. ಇನ್ನು ಕೊಂಚ ಎತ್ತರದಲ್ಲಿ ಕೊಳವೆಯಲ್ಲಿ ಧನ ವಿದ್ಯುದ್ಧ್ರುವದ ತೆಳ್ಳನೆಯ ದುಂಡು ತಗಡಿರುತ್ತದೆ. 

ಚಿತ್ರ-8

ಇದಕ್ಕೂ ತಂತುವಿಗೂ ಮಧ್ಯೆ ಒಂದು ಪರದೆಯಿದೆ. ಈ ಪರದೆ ತಂತುವನ್ನು ಎಲೆಕ್ಟ್ರಾನುಗಳ ಪ್ರವಾಹಕ್ಕೆ ಎದುರಾಗಿ ಬರುತ್ತಿರುವ ಧನ ವಿದ್ಯುತ್ತಿನ ಕಣಗಳ ಪ್ರವಾಹದಿಂದ ರಕ್ಷಿಸುತ್ತದೆ. ಧನ ವಿದ್ಯುತ್ತಿನ ಕೊಳವೆಯ ವಿದ್ಯುತ್ಪ್ರವಾಹ ತಂತುವಿನ ಋಣ ಧ್ರುವಕ್ಕಿಂತ 300 ವೋಲ್ಟುಗಳನ್ನು ಮೀರಿದರೆ ವಿದ್ಯುನ್ಮಾನಗಳ ಪ್ರವಾಹ ಒಂದು ದಿಕ್ಕು ಸಿಕ್ಕಿದ್ದರಿಂದ ಅದರ ಮೂಲಕ ನುಗ್ಗುತ್ತದೆ. ವಿದ್ಯುನ್ಮಾನಗಳು ಧನ ಧ್ರುವದಿಂದ ಕಿರಣಗಳ ಕಡ್ಡಿಯಾಗಿ ಧನ ಧ್ರುವದ ಆಚೆಗೆ ಸ್ವಲ್ಪ ದೂರ ಇಟ್ಟಿರುವ ಓರೆಯಾಗಿ ಮಾಡುವ ಎರಡು ಫಲಕಗಳ ಮಧ್ಯೆ ನುಸಿಯುತ್ತದೆ. ಇನ್ನೊಂದು ಜೊತೆ ಫಲಕಗಳು ಮತ್ತೂ ಸ್ವಲ್ಪ ದೂರವಾಗಿರುತ್ತವೆ. ಈ ಎರಡು ಜೊತೆಗಳ ಸಮತಲಗಳು ಒಂದಕ್ಕೆ ಒಂದು ಸಮಕೋನವಾಗಿರುತ್ತವೆ. ಕೊನೆಯಲ್ಲಿ ಋಣ ವಿದ್ಯುತ್ತಿನ ಕಿರಣಗಳ ಕಡ್ಡಿ ಸ್ಫುರಣ ಮಾಡುವ ಗುಣವುಳ್ಳ ಪರದೆಯನ್ನು ಮುಟ್ಟಿ ಒಂದು ಪ್ರಕಾಶಮಾನವಾದ ಚುಕ್ಕಿಯನ್ನು ಉಂಟುಮಾಡುತ್ತದೆ.
	
ಒಂದು ಜೊತೆ ಫಲಕಗಳ ನಡುವೆ ಸ್ಥಾನಶಕ್ತಿಯ ವ್ಯತ್ಯಾಸವನ್ನುಂಟು ಮಾಡಿ ಇನ್ನೊಂದು ಜೊತೆಯ ಸಂಬಂಧವನ್ನು ಕಡಿದರೆ ಪರದೆಯ ಮೇಲಿರುವ ಬೆಳಕಿನ ಚುಕ್ಕಿ ಓರೆಯಾಗುತ್ತದೆ. ಸ್ಥಾನಶಕ್ತಿಯ ವ್ಯತ್ಯಾಸ ಪರ್ಯಾಯ ವಿದ್ಯುತ್ತಿನದಾಗಿದ್ದರೆ ಓರೆಮಾಡುವ ಫಲಕದ ಸ್ಥಾನಕ್ಕೆ ಅನುಗುಣವಾಗಿ ಮಟ್ಟವಾಗಿಯಾಗಲಿ ಇಲ್ಲವೆ ಲಂಬವಾಗಿಯಾಗಲಿ, ಆ ಚುಕ್ಕಿ ಒಂದು ಸರಳರೇಖೆಯ ಮೇಲೆ ಸಂಚರಿಸುತ್ತದೆ.
	
ಒಂದು ಜೊತೆ ಫಲಕಗಳಿಗೆ ಬದಲಾಗಿ ಕೊಳವೆಯ ಹೊರಗಡೆ ಎದುರುಬದುರಾದ ಸ್ಥಾನಗಳಲ್ಲಿ ಎರಡು ತಂತಿಯ ಸುರಳಿಗಳನ್ನಿಟ್ಟು ವಿದ್ಯುನ್ಮಾನಗಳ ಪ್ರವಾಹವನ್ನು ಓರೆಮಾಡಲು ಕಾಂತಕ್ಷೇತ್ರವನ್ನು ಉತ್ಪತ್ತಿಮಾಡುವ ಈ ತಂತಿಯ ಸುರಳಿಗಳ ಮೂಲಕ ವಿದ್ಯುತ್ಪ್ರವಾಹವನ್ನು ಕಳಿಸಿ ಇದೇ ರೀತಿಯ ಭಾಗವನ್ನು ಉಂಟುಮಾಡಬಹುದು.
	
ರೇಖೆಯನ್ನು ಕಾಲಕಾಲಕ್ಕೆ ಬದಲಾಗುವ ವ್ಯತ್ಯಾಸಗಳನ್ನು ತೋರಿಸುವ ವಕ್ರರೇಖೆಗೆ ಪರಿವರ್ತನ ಮಾಡಬೇಕಾದರೆ ಒಂದು ಕಾಲದ ಆಧಾರವನ್ನು ಒದಗಿಸುವುದಕ್ಕಾಗಿ ಈ ಪರ್ಯಾಯ ವಿದ್ಯುತ್ತಿಗೆ ಸಮಕೋನವಾದ ಇನ್ನೊಂದು ಬಾಗಿಸುವ ಬಲ ಬೇಕಾಗುತ್ತದೆ. ಇದಕ್ಕಾಗಿ ಓರೆಮಾಡುವ ಎರಡನೆಯ ಜೊತೆ ಫಲಕಗಳಿಗೆ ಒಂದು ನಿಯತವಾದ (ಕಾನ್‍ಸ್ಟೆಂಟ್) ದರದಲ್ಲಿ ವಿದ್ಯುದ್ವಿಭವವನ್ನು ಪ್ರಯೋಗಿಸಬೇಕಾಗುತ್ತದೆ. ಆಗ ಪರ್ಯಾಯವಾಗುವ ಕ್ಷೇತ್ರದಿಂದ ಉದ್ಭವಿಸುವ ಬಾಗುವಿನ (ಡಿಫ್ಲೆಕ್ಷನ್) ದಿಕ್ಕಿಗೆ ಸಮಕೋನವಾಗಿರುವ ದಿಕ್ಕಿನಲ್ಲಿ ಚುಕ್ಕಿಯ ಸ್ಥಾನಪಲ್ಲಟ (ಡಿಸ್‍ಪ್ಲೇಸ್‍ಮೆಂಟ್) ಏಕ ರೀತಿಯ ಪ್ರಮಾಣದಲ್ಲಿರುತ್ತದೆ. ಆಗ ಸರಳ (ಲೀನಿಯರ್) ಕಾಲದ ಆಧಾರವುಳ್ಳ ತರಂಗ ಬರುತ್ತದೆ. ಈ ರೀತಿಯಲ್ಲಿ ಸಮಕೋನದಲ್ಲಿರುವ ಸಮಕ್ಷೇತ್ರ ವಿನ್ಯಾಸದಲ್ಲಿ ಹೀಗೆ ಪರ್ಯಾಯವಾದ ತರಂಗದ ಆಕಾರವನ್ನು ಗುರುತು ಮಾಡಬಹುದು.
	
ಬದಲಾಗುತ್ತಿರುವ ಎರಡು ಪರಿಮಾಣಗಳನ್ನು ಒಂದೇ ಕಾಲದಲ್ಲಿ ಪರಿಶೀಲಿಸಬೇಕಾಗಿ ಬಂದಾಗ ಎರಡು ಕಿರಣಗಳ ಜಾಲಗಳ ಅಧೋವಾಟ ಕಿರಣಗಳ ಆಂದೋಲನ ಮಾಪಕವನ್ನು ಉಪಯೋಗಿಸಬಹುದು. ಆದರೆ ಡಡ್ಡೆಲ್ ಮಾದರಿಯ ಅನೇಕ ಭಾಗಗಳಿರುವ ವಿದ್ಯುತ್ಕಾಂತ ಆಂದೋಲನ ಮಾಪಕವನ್ನು ಒಂದು ಯಂತ್ರದ ಮೂರು ನಿರ್ದಿಷ್ಟ ನೆಲೆಗಳಲ್ಲಿ ವಿದ್ಯುತ್ಪ್ರವಾಹಗಳು ಮತ್ತು ವಿದ್ಯುದ್ವಿಭವಗಳ ಹಾಗೆ ಅನೇಕ ಪರಿಣಾಮಗಳಲ್ಲಿ ಬದಲಾವಣೆಗಳನ್ನು ಪರಿಶೀಲಿಸಲು ಉಪಯೋಗಿಸುತ್ತಾರೆ.		(ಕೆ.ಎನ್.)
	
ಆಂದೋಲನಲೇಖಕ : ಆಂದೋಲನಲೇಖ ನೀಡುವ ವಕ್ರರೇಖೆ (ಆಸಿಲೋಗ್ರಾಫ್). ಆಸಿಲೋಗ್ರಾಫ್ ಮತ್ತು ಆಸಿಲೋಸ್ಕೋಪ್ ಪದಗಳನ್ನು ಪರ್ಯಾಯ ಪದಗಳಾಗಿ ಬಳಸುವುದುಂಟು. ಶಕ್ತಿಶಾಲಿಯಾದ ವಿದ್ಯುತ್ ಪ್ರವಾಹವಿಲ್ಲದೆ ಆಂದೋಲನಲೇಖಕ ಚಲಿಸಲಾರದು. ಆದ್ದರಿಂದ ಕ್ಷೀಣ ಪ್ರವಾಹವನ್ನು ಲೇಖಿಸಲು ಅದನ್ನು ಪ್ರಬಲ ಪ್ರವರ್ಧಕಗಳ (ಆಂಪ್ಲಿಫೈಯರ್ಸ್) ಸಹಾಯದಿಂದ ವರ್ಧಿಸಬೇಕು. ಇಂಥ ಪ್ರವರ್ಧಕಗಳು ಇಂದು ಬಳಕೆಗೆ ಬಂದಿವೆ. ವಿದ್ಯುತ್ ಅಲ್ಲದೆ ಬೇರೆ ಬದಲಾಯಿಸುವ ಕ್ರಿಯೆಗಳನ್ನೂ ಟ್ರಾನ್ಸ್‍ಡ್ಯೂಸರ್ಸ್ ಎಂಬ ಸಾಧನಗಳಿಂದ ಈ ಕ್ರಿಯೆಗಳನ್ನೇ ಅನುಸರಿಸುವ ವಿದ್ಯುತ್ ವೋಲ್ಟೇಜ್ ಆಥವಾ ಪ್ರವಾಹಗಳನ್ನಾಗಿ ಪರಿವರ್ತಿಸಿ ಪ್ರವರ್ಧಕದ ಮೂಲ ಆಂದೋಲನ ಲೇಖಕದಲ್ಲಿ ಲೇಖಿಸಲಾಗುವುದು. ಚಲನೆ, ವೇಗ, ವೇಗವರ್ಧನೆ, ಕಂಪನ, ಶಬ್ದ, ಕೆಲವು ರಾಸಾಯನಿಕ ಗುಣಗಳು, ಬೆಳಕಿನ ಉಜ್ಜ್ವಲತೆ, ವಾತಾವರಣದ ಸಂಮರ್ದ, ಆದ್ರ್ರತೆ (ಹ್ಯುಮಿಡಿಟಿ) ಇತ್ಯಾದಿ ಹಲವು ಕ್ರಿಯೆಗಳ ಗುಣಗಳನ್ನೂ ವಿದ್ಯುತ್ತನ್ನಾಗಿ ಪರಿವರ್ತಿಸುವ ಟ್ರಾನ್ ಡ್ಯೂಸರ್ಸ್ ಇವೆ.

ಚಿತ್ರ-10 

	
ಪಾಲಿಗ್ರಾಫ್ : ಹಲವು ವಿವಿಧ ಕ್ರಿಯೆಗಳನ್ನು ಅಥವಾ ಗುಣಗಳನ್ನು ಅಥವಾ ಒಂದೇ ಗುಣದ ಹಲವು ಅಂಶಗಳನ್ನು ಅಥವಾ ಹಲವಾರು ಸ್ಥಳಗಳಿಂದ ಸಂಗ್ರಹಿತವಾದ ಗುಣಗಳನ್ನು ಒಂದೇ ಸಲ ಲೇಖಿಸಲು ಪಾಲಿಗ್ರಾಫ್ ಎಂಬ ಉಪಕರಣ ಬಳಕೆಯಲ್ಲಿದೆ. ಇದರಲ್ಲಿ ಹಲವು (2, 4, 6, 8, 12, 16, 32 ಅಥವಾ ಬೇರೆ ಸಂಖ್ಯೆಗಳ) ಆಂದೋಲನ ಲೇಖಕಗಳನ್ನು ಪ್ರವರ್ಧಕಗಳೊಂದಿಗೆ ಒಂದರ ಪಕ್ಕದಲ್ಲಿ ಇನ್ನೊಂದರಂತೆ ಜೋಡಿಸಲಾಗಿದೆ. ಒಂದೇ ಕಾಗದದ ಮೇಲೆ ಇವುಗಳ ಲೇಖನಿಗಳು ಸಮಾಂತರವಾದ ಗೆರೆಗಳನ್ನು ಬರೆಯುತ್ತವೆ. ಹಲವು ಗುಣಗಳನ್ನು ಒಟ್ಟಿಗೆ ಲೇಖಿಸುತ್ತವೆ. ಪಾಲಿಗ್ರಾಫ್ ಯಂತ್ರವನ್ನೇ ಸುಳ್ಳು ಪತ್ತೇದಾರಕ (ಲೈ ಇಂಡಿಕೇಟರ್) ಎಂಬ ಹೆಸರಿನಿಂದ ಕರೆಯುವುದುಂಟು. ಆಪಾದಿತನೊಬ್ಬ ಅಪರಾಧಿಯೇ ಅಲ್ಲವೇ ಎಂದು ಕಂಡುಹಿಡಿಯಲು ಈ ಯಂತ್ರ ಬಳಕೆಯಲ್ಲಿದೆ. ಆಪಾದಿತನ ಹೃದಯಕ್ರಿಯೆ, ಮಾಂಸಖಂಡಗಳ ಕ್ರಿಯೆ, ಉಸಿರಾಡುವಿಕೆ, ಚರ್ಮದ ವಿದ್ಯುತ್ ರೋಧ ಇತ್ಯಾದಿ ಹಲವು ಗುಣಗಳನ್ನು ಟ್ರಾನ್ಸ್‍ಡ್ಯೂಸರ್‍ಗಳ ಮೂಲಕ ಪಾಲಿಗ್ರಾಫ್‍ನ ಹಲವು ನಾಲೆಗಳಲ್ಲಿ ಹಾಯಿಸಿ ಲೇಖಿಸಲಾಗುವುದು. ಅಪರಾಧಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದಾಗ ಆಪಾದಿತ ಉತ್ತರವೀಯುವಾಗ ಸುಳ್ಳು ಹೇಳುವನೆ ಅಥವಾ ನಿಜ ಹೇಳುವನೆ ಎಂಬುದನ್ನು ಅವನ ದೈಹಿಕ ಕ್ರಿಯೆಗಳ ನಡತೆಯಿಂದ ತಿಳಿದುಕೊಳ್ಳಲಾಗುವುದು. ಪಾಲಿಗ್ರಾಫ್ ತರಹೆಯ ಒಂದು ಲೇಖ ಚಿತ್ರದಲ್ಲಿ ಕೊಟ್ಟಿದೆ.
	
ಲೇಖನ ವಿಧಾನಗಳು : ಇಂದು ಹಲವು ವಿಧಗಳಲ್ಲಿ ಆಂದೋಲನ ಲೇಖನಗಳನ್ನು ಉತ್ತಮಗೊಳಿಸಲಾಗುತ್ತಿದೆ. ವಿವಿಧ ಲೇಖನಿ ಕಾಗದಗಳನ್ನು ಬಳಸಲಾಗುತ್ತಿದೆ. ಹೆಚ್ಚು ಬಳಕೆಯಲ್ಲಿರುವುದು ಸಾಧಾರಣ ಕಾಗದ, ಅದರ ಮೇಲೆ ಮಸಿಯಿಂದ ಬರೆಯುವ ಸ್ಟೈನ್‍ಲೈಸ್ ಸ್ಟೀಲ್‍ನ ಬಾಗಿಸಿದ ಕೊಳವೆ ಲೇಖನಿ. ಕೊಳವೆಯ ಒಂದು ತುದಿಯನ್ನು ಸಣ್ಣ ಪ್ಲಾಸ್ಟಿಕ್ ಕೊಳವೆಯಿಂದ ಮಸಿಯ ಬುಡ್ಡಿಗೆ ಜೋಡಿಸಿದೆ. ಇನ್ನೊಂದು ತುದಿ ಬರೆಯುತ್ತದೆ. ಮಸಿಯಿಂದ ಹಲವು ಚಿತ್ತುಗಳು ಇತರ ಕೆಲವು ತೊಂದರೆಗಳುಂಟಾದರೂ ಇದೇ ಅತ್ಯುತ್ಕøಷ್ಟವಾದ, ಅತಿ ಅಲ್ಪ ಬೆಲೆಯ ವಿಧಾನವಾಗಿದೆ. ಇದಲ್ಲದೆ ಮೇಣದಿಂದ ಲೇಪಿತವಾದ ಕಾಗದದ ಮೇಲೆ ಬರೆಯುವ ಕಾಯಿಸಿದ ಲೇಖನಿಯೂ ವಿದ್ಯುಚ್ಛಕ್ತಿಯ ಸಹಾಯದಿಂದ ವಿಶೇಷವಾದ ವಿದ್ಯುತ್ ಕಾಗದದ ಮೇಲೆ ಬರೆಯುವ ಲೇಖನಿಯೂ ಕಾರ್ಬನ್ ಕಾಗದದ ಸಹಾಯದಿಂದ ಬರೆಯುವ ಮುಳ್ಳೂ ಒತ್ತಡದಿಂದ ಗುರುತು ಮಾಡುವ ವಿಶೇಷ ಲೇಖನಿ ಕಾಗದಗಳೂ ಲೇಖನಿಯೇ ಇಲ್ಲದೆ ಮಸಿಯ ಸಣ್ಣ ಕಾರಂಜಿಯಿಂದಲೇ (ಜೆಟ್) ಬರೆಯುವ ಸಾಧನೆಯೂ ಅತಿನೇರಿಳೆ ಬೆಳಕಿನ ಸಹಾಯದಿಂದ ವಿಶೇಷ ತರಹೆಯ ಸೂಕ್ಷ್ಮ ಕಾಗದವೂ ಈಚೆಗೆ ಬಳಕೆಗೆ ಬಂದಿವೆ. ಬಿಂಬಗ್ರಾಹಿಯ ಪದ್ಧತಿಯಂತೂ ಪುರಾತನವಾಯಿತು.
	
ಲೇಖನಿಯ ಒಂದು ತುದಿಯನ್ನು ಸುರುಳಿಗೆ ಜೋಡಿಸಿರುವುದರಿಂದ ಸುರುಳಿ ತಿರುಗಿದಾಗ ಲೇಖನಿಯ ಬರೆಯುವ ತುದಿ ವೃತ್ತಾಕಾರದಲ್ಲಿ ಚಲಿಸುವುದು. ಇದರಂದ ವಿದ್ಯುತ್ಪ್ರವಾಹದ ಪ್ರಮಾಣವನ್ನು ವಕ್ರವಾದ ಗೆರೆಗಳ ಅಳತೆಯಿಂದ ತಿಳಿಯಬೇಕಾಗುತ್ತದೆ. ಈ ಕಷ್ಟವನ್ನು ನಿವಾರಿಸಲು ಕೆಲವು ಯಂತ್ರಗಳಲ್ಲಿ ನೇರವಾಗಿ ಗೆರೆಗಳನ್ನು ಬರೆಯುವ ವಿಧಾನವೂ ಜಾರಿಗೆ ಬಂದಿದೆ. ಇದನ್ನು ಮಸಿಯ ಲೇಖನಿಯ ಕಾಗದದಲ್ಲಿ ಉಪಯೋಗಿಸುವುದು ಅಸಾಧ್ಯ. ಮೇಣದ, ವಿದ್ಯುತ್ತಿನ ಮತ್ತು ಕಾರ್ಬನ್ ಕಾಗದಗಳನ್ನು ಉಪಯೋಗಿಸಬಹುದು. ಇಂಥ ಯಂತ್ರಗಳಲ್ಲಿ ಲೇಖನಿ ಬರೆಯುವ ಮುಳ್ಳಿಗೆ ಬದಲು ಅಲಗಿನ ಅಂಚನ್ನು ಹೊಂದಿದ ಕಂಬಿ ಆಗಿರುತ್ತದೆ. ಕಂಬಿ ಮೇಣದ ಕಾಗದದ ವಿಧಾನದಲ್ಲಿ ಕಾಯಿಸಲ್ಪಡುತ್ತದೆ; ವಿದ್ಯುತ್ ವಿಧಾನದಲ್ಲಿ ವಿದ್ಯುಚ್ಛಕ್ತಿಯನ್ನು ಹೊಂದಿರುತ್ತದೆ. ಕಾಗದ ಒಂದು ತೆಳ್ಳನೆಯ ಅಂಚಿನ ಕಂಬಿಯ ಮೇಲೆ ಹಾದು ಹೋಗುತ್ತದೆ. ಕಾಗದದ ಮೇಲೆ ಕಾಗದದ ಕಂಬಿಗೆ ಲಂಬವಾಗಿ ಬರೆಯುವ ಅಂಚು ಚಲಿಸುವುದರಿಂದ ಉಷ್ಣದ ಅಥವಾ ವಿದ್ಯುತ್ತಿನ ಪ್ರಭಾವದಿಂದ ಕಾಗದದ ಮೇಲೆ ಗೆರೆಗಳುಂಟಾಗುವುವು. ಲೇಖನಿ ಅಲಗಿನ ತುದಿ ವೃತ್ತಾಕಾರದಲ್ಲಿ ಚಲಿಸಿದರೂ ಗುರುತುಗಳು ನೇರವಾಗಿರುವ ಕಾಗದದ ಕಂಬಿಯ ಮೇಲೆ ಆಗುವುದರಿಂದ ಇವು ವಕ್ರಾಕಾರದಲ್ಲಿರದೆ ನೇರವಾಗಿರುತ್ತವೆ. ಕಾಗದವನ್ನು ದೊಡ್ಡ ಸುರುಳಿ ಅಥವಾ ಮಡಿಸಿದ ಮಡಿಕೆಗಳಲ್ಲಿ ಉಪಯೋಗಿಸಲಾಗುವುದು. ಮಡಿಸಿದ ಕಾಗದಗಳ ಲೇಖನವನ್ನು ಆಮೇಲೆ ಓದುವುದು ಸುಲಭ ಮಡಿಕೆಗಳು ಪುಸ್ತಕದ ಪುಟಗಳ ಹಾಗೆ ಇರುತ್ತವೆ. ಕಾಗದವನ್ನು ಚಲಿಸಲು ಗೇರ್‍ಗಳಿಂದ ಕೂಡಿದ ಮೋಟಾರ್ ಇರುತ್ತದೆ. ವೇಗವಾಗಿ ಬದಲಾಗುತ್ತಿರುವ ಕ್ರಿಯೆಗಳನ್ನು ಲೇಖಿಸುವಾಗ ಕಾಗದವನ್ನು ವೇಗವಾಗಿ ಎಳೆಯಲಾಗುತ್ತದೆ. ನಿಧಾನವಾದ ಕ್ರಿಯೆಗಳನ್ನು ಲೇಖಿಸುವಾಗ ಕಾಗದವನ್ನು ನಿಧಾನವಾಗಿ ಓಡಿಸಲಾಗುವುದು.

ಇಂದು ಅತಿ ಹೆಚ್ಚಿನ ಬದಲಾವಣೆಗಳಾಗಿರುವುದು ಆಗುತ್ತಿರುವುದು ಆಂದೋಲನ ಲೇಖಕಗಳ ಪ್ರವರ್ಧಕಗಳಲ್ಲಿ. ಎಲೆಕ್ಟ್ರಾನಿಕ್ ವಾಲ್ವ್‍ಗಳ ಸ್ಥಾನದಲ್ಲಿ ಟ್ರಾನ್ಸಿಸ್ಟರ್‍ಗಳು ಬಂದು ಪ್ರವರ್ಧಕಗಳ ಗಾತ್ರ ಮತ್ತು ಭಾರಗಳು ಕುಗ್ಗುತ್ತಿವೆ. ಟ್ರಾನ್ಸಿಸ್ಟರ್‍ಗಳಿಗಿಂತಲೂ ಸೂಕ್ಷ್ಮವಾದ ಇಂಟೆಗ್ರೇಟೆಡ್ ಸಕ್ರ್ಯೂಟ್ ಎಂಬ ಸಾಧನಗಳಿಂದ ಪ್ರವರ್ಧಕಗಳ ಗಾತ್ರ, ಭಾರಗಳು ಅಗಣನೀಯವಾಗುತ್ತಿವೆ.
	
ಆಂದೋಲನ ಲೇಖಕಗಳ ಉಪಯೋಗಗಳು : ವೈಜ್ಞಾನಿಕ ಸಂಶೋಧನೆಯಲ್ಲೂ, ಕೈಗಾರಿಕೆಯಲ್ಲೂ ಇಂದು ಆಂದೋಲನ ಲೇಖಗಳು ಅತ್ಯಗತ್ಯ. ವೈದ್ಯಕೀಯ ಸಂಶೋಧನೆ, ಆಸ್ಪತ್ರೆಗಳಲ್ಲಿ ಶರೀರದ ಹಲವು ಅವಯವಗಳ ಕಾರ್ಯವನ್ನು ಈ ಲೇಖಗಳು ಉಲ್ಲೇಖಿಸುತ್ತಿವೆ. ಇದರಿಂದ ವಿಫುಲವಾದ ಪ್ರಯೋಜನವಾಗಿದೆ. ಕಾರ್ಖಾನೆಗಳಲ್ಲಿ, ವಿದ್ಯುಜ್ಜನಕಾಗಾರಗಳಲ್ಲಿ, ನ್ಯೂಕ್ಲಿಯರ್ ಕೇಂದ್ರಗಳಲ್ಲಿ ಹಲವು ಹಂತಗಳಲ್ಲಿ ಯಾವ ಸ್ಥಿತಿಗಳಿವೆಯೆಂಬುದನ್ನು ಆಂದೋಲನಲೇಖಗಳು ನಿರಂತರವಾಗಿ ಬರೆದಿಡುತ್ತವೆ. ವಾತಾವರಣದ ಸ್ಥಿತಿಯನ್ನೂ ವಾಹನಗಳ ಓಡಾಟದ ರೀತಿಗಳನ್ನೂ ಜಲಾಶಯಗಳ ಮಟ್ಟಗಳನ್ನೂ ಪೈಪ್‍ಲೈನ್‍ಗಳಲ್ಲಿ ಹರಿಯುವ ದ್ರವಗಳ ವೇಗಗಳನ್ನೂ ಮಾನವನಿರ್ಮಿತವಾದ ಎಲೆಕ್ಟ್ರಾನಿಕ್ ಮಿದುಳೆಂದು ಕರೆಯಲಾಗುವ ಗಣಕಯಂತ್ರಗಳ ಲೆಕ್ಕಾಚಾರಗಳನ್ನೂ ಭೂಕಂಪ ಮತ್ತು ಅಣು ಬಾಂಬುಗಳಿಂದ ಉಂಟಾದ ಆಸ್ಫೋಟನೆಗಳನ್ನೂ ರಾಸಾಯನಿಕ ಕಾರ್ಯಗಳ ಗತಿಯನ್ನೂ ಈ ಯಂತ್ರಗಳು ಬರೆದಿಡುತ್ತವೆ. ವಿದ್ಯುತ್ತನ್ನಾಗಿ ಪರಿವರ್ತಿಸಲು ಸಾಧ್ಯವಾದ ಯಾವುದೇ ಕಾರ್ಯದ ರೂಪವನ್ನು ಈ ಯಂತ್ರಗಳು ಅಳೆದು ಬರೆದಿಡುತ್ತವೆ.
	
ಸೆಕೆಂಡಿಗೆ 100 ಅಥವಾ 200 ಸಲಕ್ಕಿಂತ ಹೆಚ್ಚು ವೇಗವಾಗಿ ಬದಲಾಗುವ ಕ್ರಿಯೆಗಳನ್ನು ಯಾಂತ್ರಿಕ ಆಂದೋಲನ ಲೇಖಕಗಳು ಅನುಸರಿಸಲಾರವು. ಇಂಥ ಕಾರ್ಯಗಳನ್ನು ಅಧೋವಾಟ ಕಿರಣ ಆಂದೋಲನ ಲೇಖಗಳಿಂದ (ಅಥವಾ ಟೇಪ್ ರೆಕಾರ್ಡರ್) ಪರಿಶೀಲಿಸಬೇಕು. ರೇಡಿಯೋ ತರಂಗಗಳ ರೂಪ, ರಾಡಾರ್ ಸಂಜ್ಞೆಗಳು, ಕಾಲಪ್ರಮಾಣಗಳು, ನರ ಮತ್ತು ಮಾಂಸಖಂಡಗಳ ಕೆಲವು ಕ್ರಿಯೆಗಳು, ಹೆಚ್ಚಿನ ಆವೃತ್ತಿಯ ಶಬ್ದದ ರೂಪ ಇತ್ಯಾದಿಗಳಿಗೆ ಅಧೋವಾಟ ಕಿರಣದ ಆಂದೋಲನ ಲೇಖವೇ ಅಗತ್ಯ. ಅಧೋವಾಟ ಕಿರಣದ ಆಂದೋಲನ ಲೇಖವನ್ನು ನಡೆಸಲು ತಗಲುವ ಖರ್ಚೂ ಕಡಿಮೆ. ಇವುಗಳ ಸಹಾಯದಿಂದಲೇ ಇಂದು ವೈಜ್ಞಾನಿಕಸಂಶೋಧನೆ, ಕೈಗಾರಿಕೆಗಳು ನಡೆಯುತ್ತಿವೆ. 
(ಕೆ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ